ಮೂರು ಅಥವಾ ನಾಲ್ಕನೇ ತಿಂಗಳಿನಲ್ಲಿ ಶುಭತಾರಾನುಕೂಲದಂದು ಉಪನಿಷ್ಕ್ರಮಣ ನಡೆಸಬೇಕು. ಮಗುವು ಮೊದಲ ಬಾರಿಗೆ ಮನೆಯಿಂದ ಹೊರ ಬಂದು ಸೂರ್ಯ, ಅಗ್ನಿ, ಗೋವು, ದಿಕ್ಪಾಲಕರ ಪ್ರಾರ್ಥನೆ, ದರ್ಶನ ನಡೆಸಿದಲ್ಲಿ ಮಗುವಿಗೆ ಮಾನಸಿಕ, ಶಾರೀರಿಕ ಶಕ್ತಿಗಳೂ ಆಯುಷ್ಯವೂ ವೃದ್ಧಿಸುತ್ತದೆ. ರಾತ್ರಿ ಚಂದ್ರದರ್ಶನ ಔಷಧೀದೇವತೆಗಳ ಪ್ರಾರ್ಥನೆಯೂ ಯುಕ್ತವಾಗಿದೆ.
ಶುಭದಿನದಂದು ಸ್ನಾನಮಾಡಿಸಿ ಶಿಶುವನ್ನು ವಸ್ತ್ರಾದಿಗಳಿಂದ ಅಲಂಕರಿಸಿ ಅಂಗಳದಲ್ಲಿ ಸ್ವಸ್ತಿಕೆಯನ್ನಿಟ್ಟು ಸವಿತೃದೇವತೆಯನ್ನು ಆವಾಹಿಸಿ ನೈವೇದ್ಯ ಸಮರ್ಪಣೆ ಮಾಡಿ ಪೂಜಿಸಿ, ಮಗು ಸಹಿತ ಮೂರು ಪ್ರದಕ್ಷಿಣೆ ಬಂದು , ನಂತರ ಸಮೀಪದ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ, ದೇವತಾನುಗ್ರಹಕ್ಕೆ ಪ್ರಾರ್ಥಿಸಿ, ಮನೆಗೆ ಬಂದು, ಸ್ವಸ್ತಿಕೆಯಲ್ಲಿ ಆವಾಹಿಸಿದ ಸವಿತೃ ದೇವತೆಯನ್ನು ಉದ್ವಾಸನೆ ಮಾಡಬೇಕು. ನಾಲ್ಕನೇ ಮಾಸದಲ್ಲಿ ಶುಕ್ಲಪಕ್ಷ ತಿಥಿಯಂದು ರಾತ್ರಿ ಚಂದ್ರನ ದರ್ಶನ ಮಾಡಿಸಿ ಔಷಧೀದೇವತೆಗಳನ್ನು ಪ್ರಾರ್ಥಿಸಬೇಕು.
(ಷೋಡಶ ಸಂಸ್ಕಾರ (೮) - ಅನ್ನಪ್ರಾಶನ --> ಮುಂದೆ ಓದಿ)
No comments:
Post a Comment