Tuesday, 16 June 2020

ಷೋಡಶ ಸಂಸ್ಕಾರ (೪) - ವಿಷ್ಣುಬಲಿ

ಷೋಡಶ ಸಂಸ್ಕಾರಗಳಲ್ಲಿ ಒಂದಾದ ವಿಷ್ಣುಬಲಿಯು ಗರ್ಭಿಣಿ ಸ್ತ್ರೀಯ ಎಂಟನೆಯ ತಿಂಗಳಿನಲ್ಲಿ ನಡೆಸಬೇಕಾದ ಸಂಸ್ಕಾರ. ಇದರಿಂದ ಗರ್ಭದ ತೊಂದರೆಗಳು ನಿವಾರಣೆಯಾಗಿ, ಮಹಾಪಾಪಗಳು ನಾಶವಾಗಿ, ಸುಖಪ್ರಸವಾದಿಗಳಿಗೆ ವಿಷ್ಣುವಿನ ಅನುಗ್ರಹ ದೊರೆಯುವುದೆಂಬುದು ನಂಬಿಕೆ.


ಈಶಾನ್ಯ ಭಾಗದಲ್ಲಿ ಕಲಶವನ್ನು ಸ್ಥಾಪಿಸಿ, ವಿಷ್ಣುವನ್ನು ಆವಾಹನೆ ಮಾಡಿ, ಕಜ್ಜಾಯ, ಚಕ್ಕುಲಿ, ಅಪೂಪಾಡಿಗಳನ್ನು ನೈವೇದ್ಯ ಮಾಡಬೇಕು. ಕಲಶದ ಪಶ್ಚಿಮದಲ್ಲಿ ಚತುರಪರಮಂಡಲ ಮಾಡಿ ಪೂರ್ವ ಪಶ್ಚಿಮ ದಕ್ಷಿಣೋತ್ತರವಾಗಿ ೯x ೯ ರೇಖೆಗಳನ್ನು ರಂಗವಲ್ಲಿಯಿಂದ ಬರೆದು ೬೪ ಕೋಣೆಗಳ ಮಂಡಲವನ್ನು ಸಿದ್ಧಗೊಳಿಸಿ ನೈಋತ್ಯ ಕೋಣೆಯಿಂದ ಪ್ರದಕ್ಷಿಣೆಯಾಗಿ ಹೊರಗಿನ ಸುತ್ತಿನಲ್ಲೂ ಅಂತೆಯೇ ಒಳಗಿನ ವೃತ್ತದಲ್ಲೂ ಅರಳಿನಿಂದ ಬಲಿ ಕೊಟ್ಟು, ನಂತರ ಉತ್ತರಪೂಜಾಪೂರ್ವಕ ಕರ್ಮಮುಕ್ತಾಯಗೊಳಿಸಿ, ಕಲಶೋದಕದಿಂದ ಮಾರ್ಜನ ಮಾಡಿಸಿಕೊಳ್ಳಬೇಕು.


ಇಂದಿನ ದಿನಗಳಲ್ಲಿ ವಿಷ್ಣುಬಲಿ  ಸಂಸ್ಕಾರವು ಪುಂಸವನ- ಅನವಲೋಭನ, ಸೀಮಂತ ಸಂಸ್ಕಾರಗಳೊಂದಿಗೆ ಜೊತೆಯಾಗಿ ಸೀಮಂತದ ದಿನದಂದು ಆಚರಿಸಲಾಗುತ್ತಿದೆ.


(ಷೋಡಶ ಸಂಸ್ಕಾರ (೫) -  ಜಾತಕರ್ಮ ---> ಮುಂದೆ ಓದಿ)

No comments:

Post a Comment

Featured post

ಷೋಡಶ ಸಂಸ್ಕಾರ (೮) - ಅನ್ನಪ್ರಾಶನ

ಹುಟ್ಟಿದ ಆರು ಅಥವಾ ಎಂಟನೇ ತಿಂಗಳಿನಲ್ಲಿ ಮಗುವಿಗೆ ಅನ್ನಪ್ರಾಶನ ಮಾಡಿಸಬೇಕು. ಸಮಸಂಖ್ಯೆಯ ತಿಂಗಳು ಯುಕ್ತವೆನ್ನುತ್ತಾರೆ. ಕಶ್ಮಲವನ್ನು ತಿಂದಿದ್ದ ಮಗುವಿನ ಶುದ್ಧಿಗಾಗಿ, ...

Popular Posts

Search This Blog