ನಾಮಕರಣ ಸಂಸ್ಕಾರದಿಂದ ವ್ಯಾವಹಾರ ಸಿದ್ಧಿ ಆಗುತ್ತದೆ. ಲೌಕಿಕ ಪ್ರತಿಷ್ಠೆಯೂ ಉಂಟಾಗುವುದು. ಮಗುವಿನ ಜನ್ಮಕಾಲದ ಲಗ್ನ, ನಕ್ಷತ್ರ, ತಿಥಿಗಳು ದೋಷಯುಕ್ತವೆಂದು ತಿಳಿದರೆ ಸೂಕ್ತ ಶಾಂತಿ ನಡೆಸಿ ನಂತರ ಸಂಸ್ಕಾರಗಳನ್ನು ನಡೆಸುವುದು ವಿಹಿತ.
ಹರಿವಾಣದಲ್ಲಿ ಅಕ್ಕಿಯನ್ನು ಹರಡಿ ಸುವರ್ಣದಲ್ಲಿ ಅಥವಾ ಹಳದಿಬೇರಿನಿಂದ ಮೊದಲು ಕುಲದೇವತೆಯ ಹೆಸರು ನಂತರ ಮಾಸನಾಮ, ನಕ್ಷತ್ರನಾಮ, ದೇವತೆಗಳ ಹೆಸರು, ನಾಲ್ಕನೆಯದಾಗಿ ವ್ಯವಹಾರಯೋಗ್ಯವಾದ ಹೆಸರನ್ನು ಬರೆದು ಪ್ರತಿಷ್ಠಾಮಂತ್ರ ಜಪಿಸಿ, ಷೋಡಶೋಪಚಾರ ಪೂಜೆ ಮಾಡಬೇಕು. ನಾಮಕರಣ ಲಗ್ನ ಶುಭವಾಗಲು ಬ್ರಾಹ್ಮಣರಿಗೆ ತಾಂಬೂಲ ದಕ್ಷಿಣೆ ಕೊಟ್ಟು ಬರೆದ ದೇವತೆಗಳ ಹೆಸರಿನೊಂದಿಗೆ ಭಕ್ತನಾಗಿರುವಿ ಎಂದು ಶಿಶುವಿನ ಬಲಕಿವಿಯಲ್ಲಿ ಮೂರು ಸಲ ಹೇಳಬೇಕು. ನಂತರ ಬ್ರಾಹ್ಮಣರಿಂದ ಆಶೀರ್ವಚನ ಪಡೆಯಬೇಕು.
ಶಿಶುವಿನ ಜನನಕಾಲದಲ್ಲಿ ಲಗ್ನಾದಿ ದೋಷಗಳಿದ್ದರೆ, ತಕ್ಕ ಶಾಂತಿಯನ್ನು ಮಾಡಿ ಬಳಿಕ ಜಾತಕರ್ಮ- ನಾಮಕರಣ ಸಂಸ್ಕಾರಗಳನ್ನು ಆಚರಿಸಬೇಕು.
(ಷೋಡಶ ಸಂಸ್ಕಾರ (೭) - ಉಪನಿಷ್ಕ್ರಮಣ --> ಮುಂದೆ ಓದಿ)
No comments:
Post a Comment