ಹುಟ್ಟಿದ ಆರು ಅಥವಾ ಎಂಟನೇ ತಿಂಗಳಿನಲ್ಲಿ ಮಗುವಿಗೆ ಅನ್ನಪ್ರಾಶನ ಮಾಡಿಸಬೇಕು. ಸಮಸಂಖ್ಯೆಯ ತಿಂಗಳು ಯುಕ್ತವೆನ್ನುತ್ತಾರೆ. ಕಶ್ಮಲವನ್ನು ತಿಂದಿದ್ದ ಮಗುವಿನ ಶುದ್ಧಿಗಾಗಿ, ಆಯುಷ್ಯಾಭಿವೃದ್ಧಿಗಾಗಿ, ಈ ಸಂಸ್ಕಾರವು ಮಹತ್ವದ್ದೆನಿಸಿದೆ. ೬ - ೮ - ೧೦ ತಿಂಗಳಲ್ಲಿ ಕಿವಿ ಚುಚ್ಚುವ ವಿಧಿಯಿಂದ ಮಗುವಿಗೆ ಉಂಟಾಗಬಹುದಾದ ಚರ್ಮರೋಗ ಪರಿಹಾರವೆಂದೂ, ಹಲ್ಲು ಹುಟ್ಟುವ ಮೊದಲೇ ನಡೆಸಬೇಕೆಂಬುದೂ ಗಮನಾರ್ಹ. ನಿಷ್ಕ್ರಮ - ಪ್ರಾಶನ ಈ ಎರಡು ಸಂಸ್ಕಾರಗಳನ್ನು ನಾಮಕರಣ ಸಂದರ್ಭದಲ್ಲೇ ಮಾಡುತ್ತಾರೆ. ಆದರೆ ಕುಲದಲ್ಲಿಯೇ ನಡೆಸಬೇಕಾದ ಸಂಸ್ಕಾರವನ್ನು ಮೊದಲು ಮಾಡುವುದು ಯುಕ್ತವಲ್ಲ.
ಶುಭದಿನದಂದು ಸ್ವಸ್ತಿವಾಚನ ಅಭ್ಯುದಯಿಕ ಶ್ರಾದ್ಧ ಮಾಡಿ, ಅನ್ನ, ಹಾಲು, ಮೊಸರು ಜೇನು ಇವುಗಳನ್ನು ದೇವರಿಗೆ ಸಮರ್ಪಿಸಿ ಆರತಿಯೊಂದಿಗೆ ಪೂಜಿಸಬೇಕು. ಬ್ರಾಹ್ಮಣರಿಗೆ ದಕ್ಷಿಣೆ ಕೊಟ್ಟು, ಮೊಸರು ಆರತಿಯೊಂದಿಗೆ ಪೂಜಿಸಬೇಕು. ಬ್ರಾಹ್ಮಣರಿಗೆ ದಕ್ಷಿಣೆ ಕೊಟ್ಟು ಮೊಸರು-ಜೇನು-ತುಪ್ಪ ಇವುಗಳನ್ನು ಮಿಶ್ರಣ ಮಾಡಿ ಅನ್ನವನ್ನು ಶುದ್ಧ ಪಾತ್ರೆಯಲ್ಲಿರಿಸಿ, ಪೂರ್ವಾಭಿಮುಖವಾಗಿ ಕುಳಿತ ತಾಯಿಯ ಮಡಿಲಲ್ಲಿರುವ ಶಿಶುವಿಗೆ ಒಂದು ಗ್ರಾಸವನ್ನು ಪ್ರಾಶನಮಾಡಿಸಿ ಯಥೇಷ್ಟವಾಗಿ ಉಣಿಸಿ ಮುಖ ಪ್ರಕ್ಷಾಲನೆ ಮಾಡಿಸುವುದು. ಇದೆ ಸಂದರ್ಭದಲ್ಲಿ ಮಗುವಿಗೆ "ಕರ್ಣವೇಧ" ಮಾಡಬಹುದು.
ಆರು, ಏಳು ಅಥವಾ ಎಂಟನೆಯ ತಿಂಗಳಿನಲ್ಲಿ ಕರ್ಣವೇಧವನ್ನು ಮಾಡಬೇಕು. ಇದರಿಂದ ಚರ್ಮರೋಗಾದಿಗಳು ತಡೆಗಟ್ಟುವವು ಮತ್ತು ಕಾಂತಿಯುಷ್ಠಿಯೂ ಅಭಿವೃದ್ಧಿಯಾಗುವುದು. ಹಲ್ಲು ಹುಟ್ಟುವುದಕ್ಕಿಂತ ಮೊದಲು ಕಿವಿಚುಚ್ಚಬೇಕು. ಗಂಡುಮಗುವಿಗಾದರೆ ಮೊದಲು ಬಲಕಿವಿ ನಂತರ ಎಡಕಿವಿಗೆ ಚುಚ್ಚಿದರೆ, ಹೆಣ್ಣು ಮಗುವಿಗೆ ಮೊದಲು ಎಡಕಿವಿ ನಂತರ ಬಲಕಿವಿಗೆ ಚುಚ್ಚಬೇಕೆನ್ನುವುದು ಸ್ಮೃತಿ. ಶುಭದಿನದಂದು ಮಧ್ಯಾಹ್ನದೊಳಗೆ ವಿಷ್ಣು, ಬ್ರಹ್ಮ, ಶಿವ, ಸೂರ್ಯ, ಚಂದ್ರ, ದಿಕ್ಪಾಲಕರು, ಅಶ್ವಿನೀದೇವತೆಗಳು, ಸರಸ್ವತಿ, ದೇವತೆಗಳನ್ನು ಪ್ರಾರ್ಥಿಸಿ, ಕರ್ಣವೇಧವನ್ನು ಮಾಡಬೇಕು. ಶುಕ್ಲಪಕ್ಷ ಹಾಗೂ ಶುಭವಾರಗಳು ಈ ಸಂಸ್ಕಾರಕ್ಕೆ ಸೂಕ್ತ. ಜನ್ಮಮಾಸ ಸರ್ವಥಾ ನಿಷಿದ್ಧ.
(ಷೋಡಶ ಸಂಸ್ಕಾರ (೯) - ಚೌಲಕರ್ಮ --> ಮುಂದೆ ಓದಿ )
No comments:
Post a Comment